ಮುಖ್ಯ ಪುಟ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವಿಕಿಪೀಡಿಯಕ್ಕೆ ಸ್ವಾಗತ!

ಕನ್ನಡ ವಿಕಿಪೀಡಿಯ ಕನ್ನಡದ ಒಂದು ಸ್ವತಂತ್ರ ವಿಶ್ವಕೋಶ

ಈ ವಿಶ್ವಕೋಶ ಬಹು ಭಾಷೆಗಳಲ್ಲಿ ಲಭ್ಯವಿದೆ. ಪ್ರಸ್ತುತ ಕನ್ನಡ ಆವೃತ್ತಿಯು ೨೨,೦೭೩ ವಿಷಯಗಳ ಕುರಿತಾದ ಪುಟಗಳನ್ನು ಹೊಂದಿದೆ.


ವಿಶೇಷ ಸೂಚನೆ: ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲಿ ಮಾತ್ರ ಬರೆಯಿರಿ.

ವಿಶೇಷ ಲೇಖನ

ಹವಾಯ್‌ನ ಜ್ವಾಲಾಮುಖಿ ಒಂದರಿಂದ ೧೦ ಮೀ. ಎತ್ತರದ ಲಾವಾದ ಚಿಲುಮೆ

ಜ್ವಾಲಾಮುಖಿ ಭೂಮಿಯ ಮೇಲ್ಮೈ ಅಥವಾ ಚಿಪ್ಪಿನಲ್ಲಿರುವ ಒಂದು ಬಿರುಕು. ಇಂತಹ ಬಿರುಕಿನ ಮೂಲಕ ಭೂಗರ್ಭದಿಂದ ಕುದಿಯುವ ದ್ರವರೂಪದಲ್ಲಿನ ಕಲ್ಲುಗಳು, ಬೂದಿ ಮತ್ತು ಇತರ ಅನಿಲಗಳು ಹೊರಗೆ ಚಿಮ್ಮುತ್ತವೆ. ಸಾಮಾನ್ಯವಾಗಿ ಘನರೂಪದಲ್ಲಿ ಅಥವಾ ದ್ರವರೂಪದಲ್ಲಿರುವ ಕಲ್ಲುಗಳನ್ನು ಹೊರ ಉಗುಳುವ ಇಂತಹ ಜ್ವಾಲಾಮುಖಿಗಳು ಪರ್ವತದ ಶಿಖರಭಾಗದಲ್ಲಿರುತ್ತವೆ. ಈ ಜ್ವಾಲಾಮುಖಿಗಳ ರೂಪುಗೊಳ್ಳುವಿಕೆ ಬಲು ದೀರ್ಘ ಕಾಲದ ಪ್ರಕ್ರಿಯೆ. ಜ್ವಾಲಾಮುಖಿಗಳು ನೆಲದಾಳದ ಟೆಕ್ಟಾನಿಕ್ ತಟ್ಟೆಗಳು ಒಂದಿನ್ನೊಂದರ ಬಳಿ ಸಾರಿದಾಗ ಇಲ್ಲವೇ ಪರಸ್ಪರರಿಂದ ದೂರ ಸರಿದಾಗ ಉಂಟಾಗುತ್ತವೆ. ಮಿಡ್-ಅಟ್ಲಾಂಟಿಕ್ ರಿಡ್ಜ್ ನಲ್ಲಿ ಟೆಕ್ಟಾನಿಕ್ ತಟ್ಟೆಗಳು ಪರಸ್ಪರರಿಂದ ದೂರ ಸರಿದಾಗ ರೂಪುಗೊಂಡ ಹಲವು ಜ್ವಾಲಾಮುಖಿಗಳಿವೆ. ಹಾಗೆಯೇ ಪೆಸಿಫಿಕ್ ಅಗ್ನಿ ವರ್ತುಲ (ಪೆಸಿಫಿಕ್ ರಿಂಗ್ ಆಫ್ ಫಯರ್) ದಲ್ಲಿ ತಟ್ಟೆಗಳು ಪರಸ್ಪರರ ಬಳಿ ಸಾರಿದಾಗ ರೂಪುಗೊಂಡ ಹಲವು ಜ್ವಾಲಾಮುಖಿಗಳಿವೆ. ಭೂಮಿಯ ಚಿಪ್ಪು ಸೆಳೆಯಲ್ಪಟ್ಟಾಗ ಅಥವಾ ತೆಳುವಾದಾಗ ಸಹ ಜ್ವಾಲಾಮುಖಿಗಳು ರೂಪುಗೊಳ್ಳುವುದುಂಟು. ಇಂತಹ ಜ್ವಾಲಾಮುಖಿಗಳು ಆಫ್ರಿಕದ ಬಿರುಕು ಕಣಿವೆ ಮತ್ತು ಅಮೆರಿಕದ ರಿಯೊ ಗ್ರಾಂಡ್ ಬಿರುಕಿನಲ್ಲಿ ಕಾಣಬರುತ್ತವೆ. ಇನ್ನು ಕೆಲವೇಳೆ ಟೆಕ್ಟಾನಿಕ್ ತಟ್ಟೆಗಳ ಅಂಚಿನಿಂದ ಬಲುದೂರದಲ್ಲಿ ಸಹ ಜ್ವಾಲಾಮುಖಿಗಳು ಇರುತ್ತವೆ. ಹವಾಯ್ ದ್ವೀಪದ ಜ್ವಾಲಾಮುಖಿಗಳು ಇದಕ್ಕೆ ಉದಾಹರಣೆ. ಇಂತಹವನ್ನು ಹಾಟ್ ಸ್ಪಾಟ್ ಎಂದು ಕರೆಯಲಾಗುತ್ತದೆ. ಇಂತಹ ಬಿಸಿ ಸ್ಥಾನಗಳು ಭೂಮಿ ಮಾತ್ರವಲ್ಲದೆ ಸೌರಮಂಡಲದ ಇತರ ಗ್ರಹಗಳಲ್ಲಿ ಮತ್ತು ಉಪಗ್ರಹಗಳಲ್ಲಿ ಸಹ ಇರುವುವು.

« ಹಿಂದಿನ ಸಂಚಿಕೆ | ಹಳೆಯ ಸಂಚಿಕೆಗಳು »

ನಮ್ಮ ಹೊಸ ಲೇಖನಗಳಿಂದ...


ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಲೇಖನಗಳಿಂದ ಕೆಲವು ಸ್ವಾರಸ್ಯಕರ ಸಂಗತಿಗಳು:

ಸರಸ್ವತಿ ನದಿ
  • ಮೊದಲನೇ ಚಂದ್ರಗುಪ್ತ ಕ್ರಿ.ಶ. ೩೨೦ ರ ಸುಮಾರು ಗುಪ್ತ ಸಾಮ್ರಾಜ್ಯದ ರಾಜನಾಗಿದ್ದನು. ಗುಪ್ತ ಸಾಮ್ರಾಜ್ಯದ ಆಡಳಿತಗಾರನಾಗಿ, ಅವನು ಗಂಗಾ ಪ್ರದೇಶದಲ್ಲಿ ಅನೇಕ ಪ್ರಬಲ ಕುಟುಂಬಗಳ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಕ್ಕಾಗಿ ಪರಿಚಿತನಾಗಿದ್ದಾನೆ.
  • ಸರಸ್ವತಿ ನದಿ ಋಗ್ವೇದ ಮತ್ತು ನಂತರದ ವೈದಿಕ ಹಾಗೂ ವೈದಿಕೋತ್ತರ ಪಠ್ಯಗಳಲ್ಲಿ ಉಲ್ಲೇಖಿಸಲಾದ ನದಿಗಳಲ್ಲಿ ಒಂದು. ಅದು ಹಿಂದೂ ಧರ್ಮದಲ್ಲಿ ಮುಖ್ಯ ಪಾತ್ರವಹಿಸಿತ್ತು, ಏಕೆಂದರೆ ಕ್ರಿ.ಪೂ. ೨ನೇ ಸಹಸ್ರಮಾನದ ಅವಧಿಯಲ್ಲಿ ವೈದಿಕ ಜನರು ಅದರ ತೀರಗಳಲ್ಲಿ ನೆಲೆಸಿದ್ದಾಗ ವೈದಿಕ ಸಂಸ್ಕೃತ ಮತ್ತು ಋಗ್ವೇದದ ಮೊದಲ ಭಾಗ ಹುಟ್ಟಿಕೊಂಡವು ಎಂದು ಪರಿಗಣಿಸಲಾಗಿದೆ.
  • ಹಲಾಯುಧ ೧೦ ನೇ ಶತಮಾನದ ಭಾರತೀಯ ಗಣಿತಜ್ಞ ಮೃತಾಸಂಜೀವಾನಿ ಬರೆದಿದ್ದಾರೆ .ಪಿಂಗಲರ ಚಂದಶಾಸ್ತ್ರದ ಬಗ್ಗೆ ಒಂದು ವ್ಯಾಖ್ಯಾನವನ್ನು ಬರೆದಿದ್ದಾರೆ. ಪಾಸ್ಕಲ್ನ ತ್ರಿಕೋನದ ಸ್ಪಷ್ಟ ವಿವರಣೆಯನ್ನು ಹೊಂದಿದೆ (ಇದನ್ನು ಮೇರು-ಪ್ರಸ್ತಾರ ಎಂದು ಕರೆಯಲಾಗುತ್ತದೆ).
  • ಜಿ.ಎನ್. ರಾಮಚಂದ್ರನ್ (ರಾಮಚಂದ್ರನ್, ಅಥವಾ ಜಿ.ಎನ್. ರಾಮಚಂದ್ರನ್,8 ಅಕ್ಟೋಬರ್ 1922 - 7 ಏಪ್ರಿಲ್ 2001) ಒಬ್ಬ ಭಾರತೀಯ ಭೌತವಿಜ್ಞಾನಿ. ಪೆಪ್ಟೈಡ್ ರಚನೆಯನ್ನು ಅರ್ಥಮಾಡಿಕೊಳ್ಳಲು ರಾಮಚಂದ್ರನ್ ಫ್ಲೋಟ್ ಕಂಡುಹಿಡಿದಿದ್ದಾರೆ.
  • ಅಗತ್ಯ ಸೇವೆಗಳ ನಿರ್ವಹಣಾ ಕಾಯಿದೆ ಎನ್ನುವುದು ಕೆಲವು ಸೇವೆಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರಿ ನೌಕರರ ಮೇಲೆ ಅಂಕುಶ ಹಾಕುವ ಭಾರತದ ಸಂಸತ್ತಿನಿಂದ ಸ್ಥಾಪಿಸಲಾದ ಕಾಯಿದೆಯಾಗಿದೆ.1968 ರಿಂದ ಜಾರಿಯಲ್ಲಿದೆ.

ಸುದ್ದಿಯಲ್ಲಿ

ಈ ತಿಂಗಳ ಪ್ರಮುಖ ದಿನಗಳು

ಜುಲೈ:

ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವರು

ವಿಕಿಪೀಡಿಯ ಸಾಧಕರು

ನಾವು ಈ ಬಾರಿ ಪರಿಚಯಿಸುತ್ತಿರುವ ವಿಕಿಪೀಡಿಯ ಸಾಧಕರು ಹರೀಶ ಎಂ.ಜಿ

ಹರೀಶ ಎಂ.ಜಿ

ಹರೀಶ ಎಂ.ಜಿ ಇವರು ಹಲವು ವರ್ಷಗಳಿಂದ ವಿಕಿಪೀಡಿಯ ಸಂಪಾದಕರಾಗಿ ಹಾಗೂ ನಿರ್ವಾಹಕರಲ್ಲೊಬ್ಬರಾಗಿ ನಿರ್ವಹಣೆ, ಗುಣಮಟ್ಟ ಮತ್ತು ತಾಂತ್ರಿಕತೆಗೆ ಸಂಬಂಧಿಸಿದ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಬಹಳ ವರ್ಷಗಳಿಂದ ಕನ್ನಡ ವಿಕಿಪೀಡಿಯ, ವಿಕಿಸೋರ್ಸ್, ವಿಕಿಕೋಟ್ಸ್ ಗೆ ಸಂಬಂಧಿಸಿದ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಲವಾರು ಉಪಯುಕ್ತ ಮತ್ತು ಅತೀ ಅಗತ್ಯದ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಇವರು ಕನ್ನಡ ವಿಕಿಪೀಡಿಯದ ನಿರ್ವಾಹಕರಲ್ಲೊಬ್ಬರಾಗಿದ್ದಾರೆ. ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಕಿಪೀಡಿಯದ ತರಬೇತಿ ನಡೆಸಿ ಕೊಟ್ಟಿದ್ದಾರೆ. ಕನ್ನಡ ಭಾಷೆಯ ಬಗ್ಗೆ ಉತ್ತಮ ಒಲವನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ.

ವೈಯಕ್ತಿಕ

ಅವರ ಊರು ಸಾಗರ ಸಮೀಪದ ಮಂಚಾಲೆ. ಇವರು ಪ್ರಸ್ತುತ ಬೆಂಗಳೂರಿನಲ್ಲಿರುವ ಟಾಟಾ ಎಲಕ್ಸಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ವಿಕಿಪೀಡಿಯ ಪರ್ಯಟನೆ
Map karnataka flag.JPG ಕರ್ನಾಟಕ ಮತ್ತು ಕನ್ನಡ

ಜಿಲ್ಲೆಗಳುತಾಲ್ಲೂಕುಗಳುಪ್ರಮುಖ ಸ್ಥಳಗಳುಇತಿಹಾಸಮುಖ್ಯಮಂತ್ರಿಗಳುಪ್ರಸಿದ್ಧ ವ್ಯಕ್ತಿಗಳುಬೆಂಗಳೂರುಕನ್ನಡ ವ್ಯಾಕರಣಕನ್ನಡ ಪತ್ರಿಕೆಗಳು

Nuvola filesystems www.png ಭೂಗೋಳ

ಭೂಗೋಳಖಂಡಗಳುದೇಶಗಳುನಗರಗಳುಜಲಸಮೂಹಗಳುಪರ್ವತಶ್ರೇಣಿಗಳುಮರುಭೂಮಿಗಳುಭೂಗೋಳ ಶಾಸ್ತ್ರಸೌರಮಂಡಲಖಗೋಳಶಾಸ್ತ್ರ

Nuvola apps kcoloredit.png ಕಲೆ ಮತ್ತು ಸಂಸ್ಕೃತಿ

ಸಂಸ್ಕೃತಿಭಾಷೆಗಳುಸಾಹಿತ್ಯಸಾಹಿತಿಗಳುಸಂಗೀತಸಂಗೀತಗಾರರುಧರ್ಮಜಾನಪದಹಬ್ಬಗಳುಕ್ರೀಡೆಪ್ರವಾಸೋದ್ಯಮರಂಗಭೂಮಿಚಿತ್ರರಂಗಪ್ರಾಚ್ಯ ಸಂಶೋಧಕರು

Nuvola apps kdmconfig.png ಜನ - ಜೀವನ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರುನೊಬೆಲ್ ಪ್ರಶಸ್ತಿ ಪುರಸ್ಕೃತರುಸ್ವಾತಂತ್ರ್ಯ ಹೋರಾಟಗಾರರುಭಾರತ ರತ್ನ ಪುರಸ್ಕೃತರುಜ್ಞಾನಪೀಠ ಪ್ರಶಸ್ತಿ ಪುರಸ್ಕೃತರುಉದ್ಯಮಿಗಳು ಉದ್ಯಮಗಳು

Nuvola apps kworldclock.png ಇತಿಹಾಸ

ಇತಿಹಾಸಐತಿಹಾಸಿಕ ಸ್ಥಳಗಳು-ಸ್ಮಾರಕಗಳುವಿಶ್ವ ಪರಂಪರೆಯ ತಾಣಗಳುಭಾರತದ ಇತಿಹಾಸಕಾಲ

Nuvola apps kalzium.png ವಿಜ್ಞಾನ ಮತ್ತು ತಂತ್ರಜ್ಞಾನ

ವಿಜ್ಞಾನತಂತ್ರಜ್ಞಾನತಂತ್ರಜ್ಞರುವಿಜ್ಞಾನಿಗಳುಖಗೋಳಶಾಸ್ತ್ರಜೀವಶಾಸ್ತ್ರರಸಾಯನಶಾಸ್ತ್ರಭೂಶಾಸ್ತ್ರಭೌತಶಾಸ್ತ್ರಗಣಿತ

ReligiousSymbolsIndian.PNG ಧರ್ಮ ಮತ್ತು ಆಧ್ಯಾತ್ಮಿಕತೆ

ಧರ್ಮಆಧ್ಯಾತ್ಮಹಿಂದೂ ಧರ್ಮಜೈನ ಧರ್ಮಬೌದ್ಧ ಧರ್ಮಇಸ್ಲಾಂ ಧರ್ಮಕ್ರೈಸ್ತ ಧರ್ಮಯಹೂದಿ ಧರ್ಮಸಿಖ್ ಧರ್ಮಧಾರ್ಮಿಕ ಗ್ರಂಥಗಳುಪುರಾಣ

Nuvola filesystems folder home.png ಸಮಾಜ ಮತ್ತು ರಾಜಕೀಯ

ಸಮಾಜರಾಜಕೀಯಶಿಕ್ಷಣಭಾರತದ ರಾಷ್ಟ್ರಪತಿಗಳುಭಾರತದ ಪ್ರಧಾನ ಮಂತ್ರಿಗಳುಸಮಾಜಸೇವಕರುಭಯೋತ್ಪಾದನೆ

Exquisite-xine.png ಕನ್ನಡ ಸಿನೆಮಾ

ಚಲನಚಿತ್ರಗಳುನಿರ್ದೇಶಕರುನಟರುನಟಿಯರುನಿರ್ಮಾಪಕರುಚಿತ್ರ ಸಂಗೀತಚಿತ್ರಸಾಹಿತಿಗಳು

Applications-games.svg ಮನೋರಂಜನೆ ಮತ್ತು ಕ್ರೀಡೆ

ಕ್ರೀಡೆಕ್ರೀಡಾಪಟುಗಳುಕ್ರೀಡಾ ಪ್ರಶಸ್ತಿಗಳುಕ್ರಿಕೆಟ್ಟೆನ್ನಿಸ್ಪ್ರವಾಸದೂರದರ್ಶನ


Emblem of India.svg ಭಾರತದ ಇತರ ನುಡಿಗಳಲ್ಲಿ ವಿಕಿಪೀಡಿಯ


ವಿಕಿಪೀಡಿಯ ಬಳಗದ ಇತರ ಯೋಜನೆಗಳು:
ಮೆಟಾ-ವಿಕಿ 
ಪ್ರಾಜೆಕ್ಟ್ ಸಂಯೋಜನೆ 
ವಿಕಿಮೀಡಿಯ ಕಾಮನ್ಸ್ 
ಮೀಡಿಯಾ ಕಣಜ 
ವಿಕ್ಷನರಿ 
ಶಬ್ದಕೋಶ 
ವಿಕಿ ಬುಕ್ಸ್ 
ಪುಸ್ತಕಗಳು 
ವಿಕಿ ಸೋರ್ಸ್ 
ಮುಕ್ತ ಸಾಹಿತ್ಯ 
ವಿಕಿ ಕೋಟ್ 
ಉಕ್ತಿಗಳು 
ವಿಕಿ ನ್ಯೂಸ್
ಸುದ್ದಿ
ವಿಕಿ ಸ್ಪೀಷೀಸ್
ಜೈವಿಕ ಮಾಹಿತಿ

ನಿಮಗೆ ವಿಕಿಪೀಡಿಯ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಹೋಸ್ಟ್ ಮಾಡಿರುವ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡಬಹುದು. ದೇಣಿಗೆ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ. ದೇಣಿಗೆ ಪುಟ(ಆಂಗ್ಲ ಭಾಷೆಯಲ್ಲಿ).

"https://kn.bywiki.com/w/index.php?title=ಮುಖ್ಯ_ಪುಟ&oldid=740897" ಇಂದ ಪಡೆಯಲ್ಪಟ್ಟಿದೆ